೨೦೧೯-೨೦ ರ ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ಮೊದಲ ಬಾರಿಗೆ ೨೦೨೦ ರ ಮಾರ್ಚ್ ೫ ರಂದು ಭಾರತದ ಉತ್ತರ ಪ್ರದೇಶದಲ್ಲಿ ದೃಡಪಡಿಸಲಾಯಿತು ಘಜಿಯಾಬಾದ್‌ನಲ್ಲಿ ಮೊದಲ ಸಕಾರಾತ್ಮಕ ಪ್ರಕರಣವಿದೆ . ೭ ಏಪ್ರಿಲ್ ೨೦೨೦ ರ ವೇಳೆಗೆ , ರಾಜ್ಯದಲ್ಲಿ ೩೬೩ ಪ್ರಕರಣಗಳನ್ನು ದೃಡಪಡಿಸಲಾಗಿದೆ. == ಪ್ರಕರಣಗಳ ವಿವರ == === ಜಿಲ್ಲಾವರು ಪ್ರಕರಣಗಳು === == ಟೈಮ್‌ಲೈನ್ == === ಮಾರ್ಚ್‌ ತಿಂಗಳಲ್ಲಿ === ಮಾರ್ಚ್ 5 - ಘಜಿಯಾಬಾದ್‌ನ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಇರಾನ್‌ ಗೆ ಪ್ರಯಾಣ ನಡೆಸಸಿದ್ದಾರೆ ಎಂಬ ಇತಿಹಾಸವನ್ನು ಹೊಂದಿದ್ದು,ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು . ಮಾರ್ಚ್‌ 9 - ಆಗ್ರಾ ದ ಉದ್ಯಮಿಯೊಬ್ಬರನ್ನು ಭೇಟಿಯಾದ ನಂತರ ಕಾರ್ಖಾನೆಯ ಕೆಲಸಗಾರನಒಬ್ಬನು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು . ಇದರ ಮೊದಲು ಆ ಉದ್ಯಮಿಯ ಕುಟುಂಬದ ಐದು ಸದಸ್ಯರಿಗೂ ವೈರಸ್ ಸೋಂಕು ಇರುವುದು ದೃಢವಾಗಿತ್ತು. ಮಾರ್ಚ್‌ 12 - ಇಟಾಲಿಯ ಅತಿಥಿಗಳೊಂದಿಗೆ ಸಂಪರ್ಕಕ್ಕೆ ಬಂದ ನೋಯ್ಡಾದಲ್ಲಿನ ಪ್ರವಾಸಿ ಮಾರ್ಗದರ್ಶಿ ಮತ್ತು ಕೆನಡಾದ ಮಹಿಳಾ ವೈದ್ಯರೊಬ್ಬರು ರಾಜ್ಯದ ರಾಜಧಾನಿ ಲಕ್ನೋದಲ್ಲಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಇವರನ್ನು ಕೊರೊನಾ ಸೋಂಕಿತರು ಎಂದು ದೃಢಪಡಿಸಲಾಯಿತು . ಇವರನ್ನು ಸೇರಿಸಿ ಇಲ್ಲಿಯವರೆಗೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಒಟ್ಟು ೧೦ಕ್ಕೆ ಬಂದು ನಿಂತಿತು . ಮಾರ್ಚ್‌ 13 - ನೋಯ್ಡಾದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಇಟಲಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸಿದ ನಂತರ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಇವರನ್ನು ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು . ಐದು ರೋಗಿಗಳು ಈ ದಿನದಂದು ಚೇತರಿಸಿಕೊಂಡಿದ್ದರು. ಮಾರ್ಚ್‌ 15 - ರಾಜ್ಯದ ಹನ್ನೆರಡನೆಯ ಪ್ರಕರಣ ಲಕ್ನೋದಲ್ಲಿ ವರದಿಯಾಯಿತು . ಮಾರ್ಚ್‌ 17- ಫ್ರಾನ್ಸ್‌ನಿಂದ ಹಿಂದಿರುಗಿದ ಇಬ್ಬರು ನೋಯ್ಡಾದಲ್ಲಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು . ಮಾರ್ಚ್‌ 18- ಇಂಡೋನೇಷ್ಯಾದಿಂದ ಹಿಂದಿರುಗಿದ ನೋಯ್ಡಾದ ಗೌತಮ್ ಬುದ್ಧ ನಗರ ಜಿಲ್ಲೆಯ ವ್ಯಕ್ತಿಯೊಬ್ಬರು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು . ಮಾರ್ಚ್‌ 19- ರಾಜ್ಯದಲ್ಲಿ ಇಬ್ಬರು ಜನರು, ಒಬ್ಬರು ಲಖನೌ ಮತ್ತು ಇನ್ನೊಬ್ಬರು ಲಖಿಂ.ಪುರ ಖೇರಿ ಜಿಲ್ಲೆಯವರು ಮತ್ತು ಅಂತರರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ ನೋಯ್ಡಾದ ಎಚ್‌ಸಿಎಲ್ ಉದ್ಯೋಗಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ದೃಢಪಡಿಸಲಾಯಿತು . ಮಾರ್ಚ್‌ 20- ಲಂಡನ್‌ನಿಂದ ಮರಳಿದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ , ಲಕ್ನೋ ಹಾಗೂ ಅಲ್ಲಿನ ಇನ್ನೂ ನಾಲ್ಕು ಜನರು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತರು ಎಂದು ದೃಢಪಡಿಸಲಾಯಿತು - ಇದರಲ್ಲಿ ಈ ಹಿಂದೆ ಸೋಂಕಿತ ವೈದ್ಯರಿಗೆ ಸಂಬಂಧಿಸಿದ ಮೂವರು ಮತ್ತು ಕೊಲ್ಲಿಗೆ ಪ್ರಯಾಣದ ಇತಿಹಾಸ ಹೊಂದಿರುವ ಒಬ್ಬರಿದ್ದಾರೆ . ಮಾರ್ಚ್‌ 21- ಸೂಪರ್‌ಟೆಕ್ ಕೇಪ್‌ಟೌನ್ ಸೊಸೈಟಿ, ನೋಯ್ಡಾದಲ್ಲಿ ಒಂದು ಪ್ರಕರಣವನ್ನು ದೃಢಪಡಿಸಲಾಯಿತು . === ಏಪ್ರಿಲ್‌ ತಿಂಗಳಲ್ಲಿ === ಏಪ್ರಿಲ್‌ 1- ಒಂದೇ ದಿನದಲ್ಲಿ 2 ಸಾವುಗಳು ವರದಿಯಾಗಿವೆ , ಒಂದು ಬಸ್ತಿ ಮತ್ತು ಇನ್ನೊಂದು ಮೀರತ್‌ನಲ್ಲಿ. ಇದು ರಾಜ್ಯದಲ್ಲಿ ಮೊದಲ ಸಾವು ಎಂದು ತಿಳಿದುಬಂದಿದೆ. ಏಪ್ರಿಲ್‌ 3- ಒಂದೇ ದಿನದಲ್ಲಿ 59 ಹೊಸ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 54 ಪ್ರಕರಣಗಳನ್ನು ದೆಹಲಿಯ ತಬ್ಲಿಘಿ ಜಮಾತ್‌ನಿಂದ ಹಿಂತಿರುಗಿದವರೂ ಇದ್ದಾರೆ ಎಂದು ದೃಢಪಡಿಸಲಾಗಿದೆ . ಏಪ್ರಿಲ್‌ 4- 70 ಹೊಸ ಪ್ರಕರಣಗಳು ವರದಿಯಾಗಿದ್ದು . ಅದರಲ್ಲಿ ಆಗ್ರಾದಲ್ಲಿ 25, ನೋಯ್ಡಾದಲ್ಲಿ 8, ಮೀರತ್‌ನಲ್ಲಿ 7, ಮಹಾರಾಜ್‌ಗಂಜ್‌ನಲ್ಲಿ 6 ಪ್ರಕರಣಗಳು ಎಂದು ವರದಿಮಾಡಲಾಗಿದೆ. ಏಪ್ರಿಲ್‌ 5- ರಾಜ್ಯದಲ್ಲಿ ಮೂರನೇ ಸಾವು ವಾರಣಾಸಿಯಲ್ಲಿ ವರದಿಯಾಗಿದೆ. == ಧೃಡಪಡಿಸಿದ ಸಾವುಗಳು == == ಇವನ್ನೂ ನೋಡಿ == ಭಾರತದಲ್ಲಿ ೨೦೨೦ ಕರೋನವೈರಸ್ ಸಾಂಕ್ರಾಮಿಕ ಕೇರಳದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ == ಉಲ್ಲೇಖಗಳು ==